** ಘಟಕ : ಅಂಗಾಂಶಗಳು **

sn-tissues ಸಸ್ಯ ಅಂಗಾಂಶಗಳು.
--------------------------------------------------------
ಮೈಂಡ್  ಮ್ಯಾಪ್ 
$$ ವರ್ಧನ್ ಅಂಗಾಂಶ. $$
• > ವರ್ಧನೆ --> ಎಂದರೆ  ವರ್ಧಿಸು /                                  ಬೆಳವಣಿಗೆ ಹೊಂದುವ. 
ವರ್ಧನ್ ಅಂಗಾಂಶದ  ಲಕ್ಷಣಗಳು 
• >ಸಸ್ಯಗಳ ನಿರ್ದಿಷ್ಟ ಭಾಗಗಳಲ್ಲಿ ಬೆಳವಣಿಗೆ   ನಡೆಯುತ್ತದೆ. 
• >  ವರ್ಧನ್ ಅಂಗಾಂಶದ  ಕೋಶಗಳು ವಿಭಜನೆಹೊಂದುವ ಶಕ್ತಿಯನ್ನು  ಹೊಂದಿವೆ. 
• > ಸಸ್ಯದ ಬೆಳವಣಿಗೆ ಹೊಂದುವ ಭಾಗಗಳಾದ ಬೇರು., ಕಾಂಡ, ಎಲೆ etc.
ವರ್ಧನ್ ಅಂಗಾಂಶದಲ್ಲಿ  ಮೂರು ರೀತಿಯ ಅಂಗಾಂಶಗಳಿವೆ 
× ತುದಿ--ವರ್ಧನ್ ಅಂಗಾಂಶ.
× ಪಾರ್ಶ್ವ--ವರ್ಧನ್ ಅಂಗಾಂಶ.
× ಅಂತರಗೆಣ್ಣೂ ವರ್ಧನ್ ಅಂಗಾಂಶ.
🔹ಸರಳ ಶಾಶ್ವತ ಅಂಗಾಂಶಗಳು 🔹
ವರ್ಧನ್ ಅಂಗಾಂಶದಿಂದ ಉಂಟಾದ ಕೋಶಗಳು ಬೆಳವಣಿಗೆಯ ಹೊಂದಿದ  ನಂತರ ಏನಾಗುತ್ತವೆ ? 
* ಸಾಮಾನ್ಯ ಲಕ್ಷಣಗಳು.*
--> ವರ್ಧನ್ ಅಂಗಾಂಶವು ಬೆಳವಣಿಗೆಯ ಹೊಂದಿದ  ನಂತರ ಪ್ರೌಡಾವಸ್ಥೆ ಹೊಂದುತ್ತವೆ. 
--> ತಮ್ಮ ಕೋಶವಿಭಜನೆ ಶಕ್ತಿಯನ್ನು ಕಳೆದುಕೊಳ್ಳುತ್ತವೆ. 
--> ಈ ಪರಿಣಾಮದಿಂದ ಶಾಶ್ವತ ಅಂಗಾಂಶಗಳಾಗಿ  ರೊಪಗೊಳ್ಳುತ್ತವೆ.
--> ಈ ಅಂಗಾಂಶಗಳು ಶಾಶ್ವತವಾದ, ರೂಪ, ಗಾತ್ರ ಮತ್ತು ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯ 
ವನ್ನು  ಪಡೆದುಕೊಳ್ಳುತ್ತವೆ. 
ಸರಳ ಶಾಶ್ವತ ಅಂಗಾಂಶಗಳನ್ನು  ಮುಖ್ಯವಾಗಿ  ಮೂರು  ವಿಧಗಳಾಗಿ  ವರ್ಗಿಕರಿಸಿದ್ದಾರೆ    ಅವುಗಳೆಂದರೆ >
🔹ಸರಳ ಶಾಶ್ವತ ಅಂಗಾಂಶಗಳು  •

* ಪೇರಂಕೈಮ ಅಂಗಾಂಶ.
* ಕೋಲಂಕೈಮ ಅಂಗಾಂಶ. 
* ಸ್ಕ್ಲಿರಂಕೈಮ ಅಂಗಾಂಶ.

%% ಪೇರಂಕೈಮ ಅಂಗಾಂಶಗಳು %%
👉ಪೇರಂಕೈಮ ಅಂಗಾಂಶದ ರಚನೆ :
* ಕೆಲವು ಪದರುಗಳುಲ್ಲಿ  ಜೀವಕೋಶಗಳ  ಮೂಲ  ಜೋಡಣೆ ಅಂಗಾಂಶವನ್ನು ರೂಪಿಸುತ್ತವೆ ಈ ಅಂಗಾಂಶವೇ ಪೇರಂಕೈಮ ಅಂಗಾಂಶ.
* ಇವು ಜೀವಂತ ಜೀವಕೋಶಗಳು. 
* ಸಾಮಾನ್ಯವಾಗಿ ಸಡಿಲ ಜೋಡಣೆ ಹೊಂದಿದ್ದು ಜೀವಕೋಶಗಳ ನಡುವೆ ಖಾಲಿಜಾಗ ಕಂಡುಬರುತ್ತವೆ. 
* ಒಂದು ವಿಧದ ಶಾಶ್ವತ ಅಂಗಾಂಶ 
* ತೆಳುವಾದ ಕೋಶಭಿತ್ತಿ ಇರುವ ಜೀವಕೋಶಗಳನ್ನು ಹೊಂದಿದೆ. 
👉 ಪೇರಂಕೈಮ ಅಂಗಾಂಶದ ಕಾರ್ಯ:
* ಇವು ಸಸ್ಯದ ದುರ್ಬಲ ಬಾಗಗಳಿಗೆ ಆಧಾರ ಒದಗಿಸುತ್ತವೆ. 
* ಕಾಂಡ ಮತ್ತು ಬೇರುಗಳಲ್ಲಿ ನೀರು ಮತ್ತು ಆಹಾರವನ್ನು ಸಂಗ್ರಹಿಸುತ್ತವೆ. 
* ಇವು ಪತ್ರಹರಿತ್ತುನ್ನು ಹೊಂದಿದ್ದು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುತ್ತವೆ-->ಕ್ಲೋರಂಕೈಮಾ ಎನ್ನುವರು. 
* ಜಲ ಸಸ್ಯಗಳಲ್ಲಿ ಪೇರಂಕೈಮಾದಲ್ಲಿ ದೊಡ್ಡ ಗಾಳಿ ಚೀಲಗಳ್ಳನ್ನು ಹೊಂದಿದ್ದು ಸಸ್ಯಗಳು ತೇಲಲು ಸಹಾಯ ಮಾಡುತ್ತವೆ --> ಏರಂಕೈಮಾ ಎನ್ನುವರು.
* ಕೆಲವು ತ್ಯಾಜ್ಯ ವಸ್ತುಗಳಾದ ಅಂಟು, ರಾಳ, ಗೊಂದು ನಂತಹ ತ್ಯಾಜ್ಯವನ್ನು ಸಂಗ್ರಹಿಸುತ್ತದೆ. 
👉ಪೇರಂಕೈಮ ಅಂಗಾಂಶ ಈ ಭಾಗಗಳಲ್ಲಿ ಕಂಡುಬರುತ್ತದೆ.
* ಬೇರು, ಕಾಂಡ, ಎಲೆ, ಹೂವು & ಕಾಯಿಗಳಲ್ಲಿ ಕಂಡುಬರುತ್ತವೆ. 
%% ಕೋಲಂಕೈಮಾ ಅಂಗಾಂಶಗಳು:
* ಸಸ್ಯಗಳ ನಮ್ಯತೆಗೆ ಕಾರಣವಾದ ಅಂಗಾಂಶಗಳು. 
$ ಕೋಲಂಕೈಮಾ ಅಂಗಾಂಶದ ರಚನೆ :
* ಈ ಅಂಗಾಂಶದ  ಜೀವಕೋಶಗಳು ಜೀವಂತವಾಗಿದ್ದು  ಉದ್ದವಾಗಿರುತ್ತವೆ.
* ಈ ಜೀವಕೋಶಗಳು ತೆಳುವಾಗಿದ್ದು ಪೆಕ್ಟಿನ್  ಎಂಬ ಕೋಶಭಿತ್ತಿ ಯಿಂದಾಗಿದೆ. 
* ಕೋಶೀಯ ಅವಕಾಶಗಳು ಇರುವುದಿಲ್ಲ. 
* ಜೀವಕೋಶಗಳು ಪರಸ್ಪರ ಸಂಧಿಸುವ ಮೂಲೆಗಳಲ್ಲಿ ಅನಿಯಮಿತವಾಗಿ ದಪ್ಪವಾಗಿರುತ್ತವೆ. 
ಕೋಲಂಕೈಮಾ ಅಂಗಾಂಶಗಳ ಕಾರ್ಯ:
• ಇದು ಸಸ್ಯಗಳ ಭಾಗಗಳು ಮುರಿಯದಂತೆ ಕೇವಲ ಭಾಗುವಂತೆ ಮಾಡುತ್ತವೆ. 
* ಸಸ್ಯಗಳಿಗೆ ಯಾಂತ್ರಿಕ ಆಧಾರವನ್ನು ಒಡೆಗಿಸುತ್ತದೆ. 
* ಇವು ಜೀವಂತಕೋಶಗಳದ್ದರಿಂದ ಆಹಾರ ಸಂಗ್ರಹಿಸುತ್ತವೆ. 
* ಇವು ಪತ್ರಹರಿತ್ತುನ್ನು ಹೊಂದಿದ್ದು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುತ್ತವೆ.
👉 ಕೋಲಂಕೈಮಾ ಅಂಗಾಂಶ ಈ ಭಾಗಗಳಲ್ಲಿ ಕಂಡುಬರುತ್ತದೆ:
*ಸಸ್ಯದ ತೊಗಟೆ  ಕೆಳಭಾಗದಲ್ಲಿ ಕಂಡುಬರುತ್ತದೆ
* ಎಲೆಯಸಸ್ಯದ  ತೊಟ್ಟು, ಎಲೆಯ ಮಧ್ಯಭಾಗ. 
* ದ್ವಿದಳ ಧಾನ್ಯಗಳ ಬಳ್ಳಿಗಳ ಕಾಂಡದಲ್ಲಿ, 
ಕಂಡುಬರುತ್ತದೆ.
$ ಸ್ಲೀರಂಕೈಮಾ ಅಂಗಾಂಶಗಳು $ 
* ಇದು  ಸಸ್ಯದ ಧೃಢಕಾಯ ಅಂಗಾಂಶ. 
×× ಸ್ಲೀರಂಕೈಮಾ ಅಂಗಾಂಶಗಳ ರಚನೆ :
* ಸ್ಕ್ಲಿರಂಕೈಮಾ ಅಂಗಾಂಶ ನಿರ್ಜಿವ ಕೋಶಗಳಿಂದಾಗಿವೆ. 
* ಈ ಅಂಗಾಂಶದ ಕೋಶಗಳೊಳಗೆ ಖಾಲಿ ಅವಕಾಶ ಇರುವುದಿಲ್ಲ. 
* ಕೋಶಗಳು ಉದ್ದವಾಗಿಯು, ನೀಳವಾಗಿಯೂ ಮತ್ತು ಲಿಗ್ನಿನ್ ಎಂಬ ಕೋಶಭಿತ್ತಿಯಿಂದಾಗಿದೆ.
×× ಸ್ಲೀರಂಕೈಮಾ ಅಂಗಾಂಶಗಳ ಕಾರ್ಯ:
* ಸಸ್ಯಗಳಿಗೆ ಬಲವಾದ / ದೃಢತೆಯನ್ನು  ಕೊಡುತ್ತವೆ. 
* ಬೀಜ ಮತ್ತು ಕಾಯಿಗಳನ್ನು ಸಂರಕ್ಷಿಸುತ್ತದೆ.
* ತೆಂಗಿನ ನಾರು, ಜೂಟ್ ನಾರು, ಗಟ್ಟಿಯಾಗಿದ್ದು ಬೇಕಾದ ಆಕಾರಕ್ಕೆ ಬಾಗುವದರಿಂದ ಚೀಲ, ಹಗ್ಗಗನ್ನು ತಯಾರಿಸಲು ಬಳಸುತ್ತಾರೆ. 
% ಸ್ಲೀರಂಕೈಮಾ ಅಂಗಾಂಶಗಳ ಈ ಭಾಗಗಳಲ್ಲಿ ಕಂಡುಬರುತ್ತದೆ:
* ಕ್ಸೈಲಂ & ಫ್ಲೋಯಂ ( ನಾಳಕೂರ್ಚಗಳು ) ಸುತ್ತಲೂ ಕಂಡುಬರುತ್ತವೆ.
* ಕ್ಸೈಲಂ & ಫ್ಲೋಯಂ ಒಳಗೆ ಕಂಡುಬರುತ್ತವೆ. 
* ಗಟ್ಟಿಭಾಗವಾದ ತೆಂಗಿನ ನಾರು, ತೆಂಗಿನ ಚ್ಚಿಪ್ಪು ಬೀಜಗಳ ಗಟ್ಟಿ ಕವಚಗಳಲ್ಲಿ ಕಂಡುಬರುತ್ತವೆ.